ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ಕಾನೂನು ಕುಟು0ಬ ಕಲಹಕ್ಕೆ ಕಾರಣವಾಗಬಾರದು. ನ್ಯಾಯಮೂರ್ತಿ ಬಿ.ವಿ. ನಾಗರತ್ನ.


ಕರ್ನಾಟಕ ರಾಜ್ಯ ವಕೀಲರ ಪರಿಷತ್ ತಾರೀಕು 25 ಜೂನ್ 2022 ರಂದು ಮಂಡ್ಯದಲ್ಲಿ ಆಯೋಜಿಸಿದ್ದ ಪ್ರೊ. ಲಕ್ಶ್ಮಿಸಾಗರ್ ನೆನಪಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಉಪನ್ಯಾಸ ನೀಡಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀಮತಿ ಬಿ.ವಿ. ನಾಗರತ್ನ ಅವರು ಹಿಂದೂ ಉತ್ತರಾಧಿಕಾರ ಕಾನೂನಿನ ತಿದ್ದುಪಡಿ ಅನ್ವಯ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಭಾಗ ಬಂದಿರುವುದು ಸಂತೋಷಕರ. ಆದರೆ ಈ ತಿದ್ದುಪಡಿ ಕುಟುಂಬ ಕಲಹ ಉಂಟು ಮಾಡುವ ಸಾಧನ ಆಗಬಾರದು ಎಂದು ಅಭಿಪ್ರಾಯಪಟ್ಟರು. 

ಮಹಿಳೆಯ ಸಬಲೀಕರಣ ವಿಚಾರದಲ್ಲಿ ಸುದೀರ್ಘವಾಗಿ ಭಾಷಣ ಮಾಡಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ತಲೆತಲಾಂತರಗಳಿಂದ ಮಹಿಳೆಯರಿಗೆ ಆದ ಅನ್ಯಾಯವನ್ನು ಸರಿಪಡಿಸುವ ಕಾನೂನುಗಳ ಬಗ್ಗೆ ವಿವರಿಸಿದರು. 

ಹಲವಾರು ಕುಟುಂಬಗಳಲ್ಲಿ ಮದುವೆಯಾದ ಹೆಣ್ಣು ಮಕ್ಕಳು ತಮ್ಮ ಗಂಡನ ಮನೆಯಲ್ಲಿ ಹಣಕಾಸಿನ ತೊ0ದರೆ ಇಲ್ಲದೆ ಬದುಕನ್ನು ನಡೆಸುತ್ತಿರುವ ಸನ್ನಿವೇಶದಲ್ಲಿ ಹಾಗೂ  ಅವರ ಅಣ್ಣತಮ್ಮಂದಿರು, ತ0ದೆ ಬಡತನದ ಜೀವನ ನಡೆಸುತ್ತಿರುವ ಸನ್ನಿವೇಶದಲ್ಲಿ ಹಿ0ದೂ ಉತ್ತರಾಧಿಕಾರಿ ಕಾನೂನಿನ ತಿದ್ದುಪಡಿಯ ಪ್ರಕಾರವಾಗಿ ಪಿತ್ರಾರ್ಜಿತ ಆಸ್ತಿಯನ್ನು ಕೇಳುವ ಬಗ್ಗೆ ಸ್ವಲ್ಪ ವಿಚಾರ ಮಾಡಬೇಕು ಎಂದು ಹೇಳಿದರು. 

ನ್ಯಾಯಮೂರ್ತಿ ಶ್ರೀಮತಿ ಬಿ.ವಿ. ನಾಗರತ್ನ ಇವರು ನೀಡಿದ ಉಪನ್ಯಾಸದ ವಿಡಿಯೋ ಇಲ್ಲಿ ನೋಡಬಹುದು. 

https://youtu.be/36C9J0mlSYc

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿ0ದ ಮೊದಲ ಬಾರಿಗೆ ತಾಲೂಕು ಮಟ್ಟದ ಅ0ತರ್ಜಾಲ ಕಾನೂನು ಕಾರ್ಯಾಗಾರ.

Unknown Lady attacks & ridicules Karnataka High Court Judges. Complaint filed through the Registrar General High Court of Karnataka.

Justice K.N.Phaneendra appointed as Upa Lokayukta for the State of Karnataka