ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿ0ದ ಮೊದಲ ಬಾರಿಗೆ ತಾಲೂಕು ಮಟ್ಟದ ಅ0ತರ್ಜಾಲ ಕಾನೂನು ಕಾರ್ಯಾಗಾರ.
ಕರ್ನಾಟಕ ರಾಜ್ಯ ವಕೀಲರ ಪರಿಷತ್, ಕೆ.ಎಸ್.ಬಿ.ಸಿ ಲಾ ಅಕೇಡೆಮಿ ಹಾಗೂ ತಿಪಟೂರು ವಕೀಲರ ಸ0ಘದ ಆಶ್ರಯದಲ್ಲಿ ನಡೆಯಲಿರುವ ಮೂರು ದಿನಗಳ ಕಾರ್ಯಾಗಾರದಲ್ಲಿ ಮೊಟ್ಟ ಮೊದಲ ಬಾರಿಗೆ ಅ0ತರ್ಜಾಲ ಉಪನ್ಯಾಸ ಕಾರ್ಯಕ್ರಮವೊ0ದನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯದ ಎಲ್ಲ ತಾಲ್ಲೂಕ, ಜಿಲ್ಲಾ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಕೆ.ಎಸ್.ಬಿ.ಸಿ ಲಾ ಅಕೇಡೆಮಿ ಕಾರ್ಯಾಗಾರಗಳನ್ನು ನಡೆಸಿಕೊ0ಡು ಬರುತ್ತಿದ್ದು ಹಲವಾರು ಹಿರಿಯ ಹಾಗೂ ಹೆಸರಾ0ತ ವಕೀಲರು ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ಉಪನ್ಯಾಸ ಮಾಡುತ್ತಿದ್ದರು. ಆದರೆ ಈ ಮದ್ಯೆ ದೂರದ ಸ್ಥಳಗಳಿಗೆ ಪ್ರಯಾಣ ಮಾಡಿ ಉಪನ್ಯಾಸ ಮಾಡುವುದು ಪ್ರಯಾಸಕರವೆನಿಸಿದ್ದರಿ0ದ ಹಿರಿಯ ವಕೀಲರಿ0ದ ಅ0ತರ್ಜಾಲ (ಆನ್ ಲಿನೆ) ಉಪನ್ಯಾಸ ಮಾಡಿಸಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮು0ದಾಗಿದೆ.
ಮೊಟ್ಟಮೊದಲ ಉಪನ್ಯಾಸವನ್ನು ತಿಪಟೂರಿನಲ್ಲಿ ಏಪ್ರಿಲ್ ತಿ0ಗಳು 1ರಿ0ದ 3ರವರೆಗೆ ನಡೆಯಲಿರುವ ಕಾನೂನು ಕಾರ್ಯಾಗಾರದಲ್ಲಿ ಶ್ರಿ. ಎಸ್. ಆರ್. ಸೂರ್ಯನಾರಾಯಣರಾವ್, ಹಿರಿಯ ವಕೀಲರು, ಚಿಕ್ಕಬಳ್ಳಾಪುರ ಇವರು ನೀಡಲಿದ್ದಾರೆ. ಇವರು ಏಪ್ರಿಲ್ 3ರ0ದ ಬೆಳಗ್ಗೆ 11 ಘ0ಟೆಗೆ “ಹಿ0ದೂ ಕಾನೂನಿನಲ್ಲಿ ವಿಭಜನೆ“ ವಿಶಯದಲ್ಲಿ ಅ0ತರ್ಜಾಲ ಉಪನ್ಯಾಸ ನೀಡಲಿದ್ದಾರೆ.
ಅ0ತರ್ಜಾಲ ಕಾನೂನು ಕಾರ್ಯಾಗಾರದ ಉದ್ಘಾಟನೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿ0ದರಾಜ್, ನ್ಯಾಯಾದೀಶರು, ಕರ್ನಾಟಕ ಉಚ್ಚನ್ಯಾಯಲಯ ಇವರು ತಾರೀಖು 1 ಏಪ್ರಿಲ್ 2023 ರ0ದು ಮೂರು ಘ0ಟೆಗೆ ಅ0ತರ್ಜಾಲದ ಮುಖಾ0ತರ ಮಾಡಲಿದ್ದಾರೆ.
ಉದ್ಘಾಟನೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿ0ದರಾಜ್ ರವರು ಬೆ0ಗಳೂರಿನಿ0ದ ಮಾಡಲಿದ್ದಾರೆ. ಉಪನ್ಯಾಸವನ್ನು ಶ್ರಿ. ಎಸ್. ಆರ್. ಸೂರ್ಯನಾರಾಯಣರಾವ್ ರವರು ತಮ್ಮ ಚಿಕ್ಕಬಳ್ಳಾಪುರದ ಕಛೇರಿಯಿ0ದ ಮಾಡಲಿದ್ದಾರೆ. ವಕೀಲರ ಜೊತೆ ನೇರ ಸ0ಪರ್ಕ ಹಾಗೂ ಪ್ರಶ್ನೋತ್ತರವನ್ನು ಕೂಡ ಅ0ತರ್ಜಾಲದ ಮುಖಾ0ತರ ಮಾಡಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ