ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹ. ವಕೀಲೆ ಸ0ಗೀತಾ ಶಿಕ್ಕೇರಿಗೆ ಕಾರಣ ಕೇಳಿ ನೋಟೀಸ್. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಜವಾಬ್ದಾರಿಯುತ ನಿರ್ಧಾರ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇಂದು ನಡೆದ ಅ0ತರ್ಜಾಲ ಸಭೆಯಲ್ಲಿ ಎರಡು ಜವಾಬ್ದಾರಿಯುತವಾದ ನಿರ್ಣಯಗಳನ್ನು ಸರ್ವಾನುಮತದಿ0ದ ಕೈಗೊಂಡಿದ್ದು ಅದರ ಪ್ರಕಾರ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸುವುದು ಮತ್ತು ಅದೇ ರೀತಿ ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದ ಬಳಸಿ, ಚಪ್ಪಲಿ ಹಲ್ಲೆ ನಡೆಸಿದ ಬಾಗಲಕೋಟೆ ವಕೀಲೆ ಸ0ಗೀತಾ ಶಿಕ್ಕೇರಿ ವಿರುದ್ಧ ಕೂಡ ಶಿಸ್ತು ಕ್ರಮ ಕೈಗೊಳುವ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಮಹಿಳಾ ವಕೀಲರ ವಿರುದ್ಧ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಾರ್ವಜನಿಕ ತಾಣಗಳಲ್ಲಿ ಪ್ರಚಾರ ಗೊಂಡಿದ್ದು ರಾಜ್ಯಾದ್ಯಂತ ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಪರಿಷತ್ತಿನ ಅಧ್ಯಕ್ಷರು ಎಲ್ಲ ಸದಸ್ಯರ ಪರವಾಗಿ ಹೇಳಿಕೆ ನೀಡಿ ಆ ವ್ಯಕ್ತಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.
ಆದರೆ ನ0ತರ ಕ0ಡು ಬ0ದ ಎರಡನೇ ವಿಡಿಯೋದಲ್ಲಿ ವಕೀಲೆ ಸ0ಗೀತಾ ಶಿಕ್ಕೇರಿ ಇದೇ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿ0ದಿಸುತ್ತಿರುವುದು ಹಾಗೂ ಹಲ್ಲೆಯ ಮೊದಲೇ ಆತನಿಗೆ ಚಪ್ಪಲಿ ಹೊಡೆತ ನೀಡಿರುವುದು ಕೂಡ ಕಂಡುಬಂದಿದೆ. ಹಲ್ಲೆಮಾಡಿದ ವ್ಯಕ್ತಿಯ ಪತ್ನಿ ನೀಡಿದ ದೂರಿನ ಮೇಲೆ ವಕೀಲೆ ಸ0ಗೀತಾ ಶಿಕ್ಕೇರಿ ವಿರುದ್ದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ದಾಖಲು ಮಾಡಿರುವುದನ್ನು ಕೂಡ ಪರಿಷತ್ತಿನ ಗಮನಕ್ಕೆ ಇ0ದು ತರಲಾಯಿತು.
ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪರಿಷತ್ತಿನ ಸದಸ್ಯರು ಅತ್ಯಂತ ಜವಾಬ್ದಾರಿಯುತವಾದ ಮಾತುಗಳನ್ನು ಇ0ದಿನ ಸಭೆಯಲ್ಲಿ ನುಡಿದು, ಸರ್ಕಾರದ ಮುಂದೆ ರಕ್ಷಣಾ ಕಾಯ್ದೆಗೆ ಆಗ್ರಹ ಮಾಡುವ ಸಮಯದಲ್ಲಿ ಪರಿಷತ್ತು ತಪ್ಪು ಮಾಡಿದವರ ವಿರುದ್ಧ ಕೂಡ ಕ್ರಮ ಕೈಗೊಳ್ಳುತ್ತದೆ ಎಂಬ ಭಾವನೆಯನ್ನು ಮೂಡಿಸಬೇಕಾಗಿದೆ ಎ0ಬ ಭಾವನೆಯನ್ನು ವ್ಯಕ್ತಪಡಿಸಿದರು. ಎಲ್ಲ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮೇಲೆ ಹೇಳಿದ ಎರಡು ನಿರ್ಧಾರಗಳನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇ0ದು ತೆಗೆದುಕೊಂಡಿತು.
ಉತ್ತಮ ನಿರ್ಧಾರ
ಪ್ರತ್ಯುತ್ತರಅಳಿಸಿ