ವಕೀಲರಾದ ಜಯದೇವ ಬಿ ಕೆರೋಡಿ ಮೇಲೆ ಪೊಲೀಸರಿ0ದ ಅಮಾನವೀಯ ಹಲ್ಲೆ. ಕರ್ನಾಟಕ ರಾಜ್ಯ ವಕೀಲರ ಪರಿಷತ್ ತುರ್ತು ಕ್ರಮ.

 



ಶಿಕಾರಿಪುರ ತಾಲೂಕು ತೊಗರ್ಸಿ ಗ್ರಾಮದ ವಕೀಲರಾದ ಶ್ರಿ.ಜಯದೇವ ಬಿ ಕೆರೋಡಿ ಮೇಲೆ ಪೊಲೀಸರಿ0ದ ಅಮಾನವೀಯ ಹಲ್ಲೆ ಘಟನೆ ನಡೆದ ನ0ತರ ಕರ್ನಾಟಕ ರಾಜ್ಯ ವಕೀಲರ ಪರಿಷತ್ ತಕ್ಷಣವೇ ಕಾರ್ಯಪ್ರವೃತ್ತವಾಗಿ ಮಾಜಿ ಅಧ್ಯಕ್ಷರಾದ ಶ್ರಿ. ಪಿ.ಪಿ.ಹೆಗಡೆಯವರನ್ನು ಸ್ಠಳಕ್ಕೆ ಬೇಟಿ ನೀಡಿ ವರದಿ ನೀಡುವ0ತೆ ಕೋರಿತು. ಅದರ0ತೆ ಶ್ರಿ. ಪಿ.ಪಿ.ಹೆಗಡೆಯವರು ನೀಡಿದ ವರದಿ ಇಲ್ಲಿದೆ. 

"ಶಿಕಾರಿಪುರ ನೂತನ ನ್ಯಾಯಾಲಯ ಸಂಕೀರ್ಣ ಉದ್ಘಾಟನಾ ಸಮಾರಂಭಕ್ಕೆ ನಿನ್ನೆ ನಾನು ತೆರಳಿದ್ದು ಇದೇ ಸಂದರ್ಭದಲ್ಲಿ ಹಿರೇಕೆರೂರಿನ ವಕೀಲರಿಗೆ ಪೊಲೀಸ್ ದೌರ್ಜನ್ಯದ ವಿಚಾರವಾಗಿ ಹಿರೇಕೆರೂರಿನ ಹಾಗೂ ಶಿಕಾರಿಪುರದ ವಕೀಲರು ಸುದೀರ್ಘವಾದ ಮಾಹಿತಿಯನ್ನು ನೀಡಿರುತ್ತಾರೆ. 

ವಕೀಲರು ನೀಡಿರುವ ಮಾಹಿತಿ ಹಾಗೂ ಎಲ್ಲಾ ದಾಖಲಾತಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ಕಂಡುಬಂದ ಅಂಶಗಳು:

ವಕೀಲರಾದ ಜಯದೇವ ಬಿ ಕೆರೋಡಿ ಅವರಿಗೆ ಪೋಲಿಸ್ ಇನ್ಸ್ಪೆಕ್ಟರ್ ಮತ್ತಿತರ ಪೊಲೀಸರು ವಿನಾಕಾರಣ ಅಮಾನುಷವಾಗಿ ಹಲ್ಲೆ ಮಾಡಿರುವುದು ಲಾಠಿಯಿಂದ ಹೊಡೆದು ನೆಲಕ್ಕೆ ಬೀಳಿಸಿ ಬೂಟುಗಾಲಿನಿಂದ ವದ್ದು  ಮೈಮೇಲೆಲ್ಲ ವಿಪರೀತವಾಗಿ ಹೊಡೆದು, ವಕೀಲರಿಗೆ ಮತ್ತು ವಕೀಲ ಸಮುದಾಯಕ್ಕೆ ನಿನ್ ಧನಾತ್ಮಕವಾಗಿ ಬೈದು ನಿರಂತರ ದೈಹಿಕ ಹಲ್ಲೆಗೊಳಿಸಿ ಅವಮಾನಗೊಳಿಸಿ ಚಿತ್ರಹಿಂಸೆಗೆ ಗುರಿ ಪಡಿಸಿರುತ್ತಾರೆ ಹಾಗೂ ಅವರ ಮೊಬೈಲನ್ನು ನೀರಿನ ಟ್ಯಾಂಕಿಗೆ ಬಿಸಾಡಿ ಜೀವಬೆದರಿಕೆ ಹಾಕಿರುತ್ತಾರೆ.

 ಅಮಾನುಷವಾಗಿ ಹಲ್ಲೆ ಮಾಡಿರುವ ಪೊಲೀಸ್ ಇನ್ಸ್ಪೆಕ್ಟರ್ ಅವರ ಸಿಬ್ಬಂದಿ ಮಹಿಳಾ ಪೊಲೀಸ್ ಕಾನ್ಸಟೇಬಲ್ ಹೆಸರಿನಲ್ಲಿ ಸುಳ್ಳು ದೂರನ್ನು ತಯಾರಿಸಿ ನ್ಯಾಯಾಲಯಕ್ಕೆ ಹಾಜರು ಮಾಡಿ ಪಡಿಸಿ ಜೈಲಿಗಟ್ಟಲಾಗಿದೆ.

ರಾತ್ರಿ 8.30 ಗೆ ಶಿಕಾರಿಪುರ ಜೆಎಂಎಫ್ಸಿ ನ್ಯಾಯಾಧೀಶರ ಮನೆಯಲ್ಲಿ  ಗಾಯಗೊಂಡ ವಕೀಲರನ್ನು  ಹಾಜರುಪಡಿಸಿದಾಗ ಅವರ ಮೈ ಮೇಲಿರುವ ಗಾಯಗಳನ್ನು  ನಡವಳಿಯಲ್ಲಿ ದಾಖಲಿಸಲು ಹಾಗೂ ತಕ್ಷಣವೇ ವೈದ್ಯಕೀಯ ನೆರವು ನೀಡುವಲ್ಲಿ ಸಂಬಂಧಿತ ನ್ಯಾಯಾಧೀಶರು ಕರ್ತವ್ಯ ಚ್ಯುತಿ ಆಗಿರುತ್ತಾರೆ ಎಸಗಿರುತ್ತಾರೆ.

ಪೊಲೀಸರು ಹಲ್ಲೆ ಎಸಗಿರುವ ಕೆಲವೊಂದು ಭಾಗ ದೇವಸ್ಥಾನದ ಮುಂದಿರುವ ಸಿಸಿಟಿವಿಯಲ್ಲಿ ಮುದ್ರಿತವಾಗಿದೆ. ದೇವಸ್ಥಾನದ ಬೇರೆ ಕಡೆ ಇರುವ ಸಿಸಿಟಿವಿ ಕೆಮರಾದಲ್ಲಿ ಕ್ಯಾಮರಾದ ದೃಶ್ಯಾವಳಿಗಳು ಪೊಲೀಸರ ಬಳಿ ಇದ್ದು ನಮಗೆ ಲಭ್ಯವಾಗಿಲ್ಲ. ಇದನ್ನು ಪೊಲೀಸರು ನಾಶ ಪಡಿಸುವ ಸಾಧ್ಯತೆ ನಿಚ್ಚಳವಾಗಿದೆ.

ಹಲವಾರು ಜನ ಭಕ್ತಾದಿಗಳ ಸಮಕ್ಷಮದಲ್ಲಿ ದೇವಸ್ಥಾನದ ಪ್ರವೇಶದ್ವಾರದಲ್ಲಿ ಈ ಭೀಭತ್ಸ ಕೃತ್ಯ ನಡೆದಿದ್ದರೂ ಕೂಡ  ಸಾಕ್ಷಿಗಳು ಸ್ಥಳೀಯ ಪೊಲೀಸರ ವಿರುದ್ಧ ಸಾಕ್ಷಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.  ನಿರಪರಾಧಿ ಗಾಯಾಳು ವಕೀಲರು ಇನ್ನೂ ನ್ಯಾಯಾಂಗ ಬಂಧನದಲ್ಲಿದ್ದು ಅವರ ಜಾಮೀನು ಅರ್ಜಿ jmfc  ನ್ಯಾಯಾಲದಲ್ಲಿ ತಿರಸ್ಕೃತವಾಗಿದೆ. ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಜಾಮೀನು ಅರ್ಜಿ ಸಲ್ಲಿಸಲಾಗುತ್ತದೆ.  ಘಟನೆ ಬಗ್ಗೆ ದೂರು ನೀಡಲು ಕಣ್ಣಾರೆ ಕಂಡ ಸಾಕ್ಷಿದಾರರು ಪೊಲೀಸರ ಭಯದಿಂದಾಗಿ ಹಿಂದೇಟು ಹಾಕುತ್ತಿದ್ದಾರೆ.

ಈತನ್ಮಧ್ಯೆ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಸ್ಥಳೀಯ ವಕೀಲ ಸಂಘದ ಪದಾಧಿಕಾರಿಗಳು ಶಿವಮೊಗ್ಗ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳೊಂದಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಮಿತ್ರರಾದ ವಿವೇಕ್ ಸುಬ್ಬಾರೆಡ್ಡಿ ನೇತ್ರತ್ವದಲ್ಲಿ ಎಸ್ಪಿಗೆ ಹಾಗೂ ತಹಸಿಲ್ದಾರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. 

ವಕೀಲ ಪರಿಷತ್ತಿನ ಅಧ್ಯಕ್ಷರು ಪದಾಧಿಕಾರಿಗಳು ತಕ್ಷಣವೇ ಭೇಟಿಯಾಗಿ ಕ್ರಮಕ್ಕಾಗಿ ಆಗ್ರಹಿಸಬೇಕೆಂದು ವಿನಂತಿ.

ನಮ್ಮ ಬೇಡಿಕೆಗಳು:

1. ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಬೇಕು.

2. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ತಕ್ಷಣವೇ ಅಮಾನತಗೊಳಿಸಿ ಬಂಧಿಸಿ ಶಿಕ್ಷೆಗೊಳಪಡಿಸಬೇಕು.

3. ನಿರಪರಾಧಿ ವಕೀಲರ ತಕ್ಷಣವೇ ಬಿಡುಗಡೆಯಾಗಬೇಕು."


ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹೋರಾಟ ನಡೆಸಲಿದೆ ಹಾಗೂ ವಕೀಲರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿದೆ.  


ಕಾಮೆಂಟ್‌ಗಳು

  1. ವಕೀಲರ ಪರಿಷತ್ತಿನ ಈ ನಡೆ ಅತ್ಯಂತ ಶ್ಲಾಘೀಯವಾದುದು. ನೊಂದವರಿಗೆ ಆದಷ್ಟು ಬೇಗ ನ್ಯಾಯ ದೊರಕಲಿ ಎಂದು ಭಗವಂತನಲ್ಲಿ ಬೇಡುತ್ತೇನೆ.

    ಪ್ರತ್ಯುತ್ತರಅಳಿಸಿ
  2. ವಕೀಲರಿಗೆ ಹೀಗೆ ಆದರೆ ಸಾಮಾನ್ಯ ಜನರ ಗತೀ ಏನು. ತಪ್ಪು ಮಾಡಿದವರನ್ನು ಸುಮ್ಮನೆ ಬಿಡ ಬಾರದು.

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಿ0ದ ಮೊದಲ ಬಾರಿಗೆ ತಾಲೂಕು ಮಟ್ಟದ ಅ0ತರ್ಜಾಲ ಕಾನೂನು ಕಾರ್ಯಾಗಾರ.

Unknown Lady attacks & ridicules Karnataka High Court Judges. Complaint filed through the Registrar General High Court of Karnataka.

Justice K.N.Phaneendra appointed as Upa Lokayukta for the State of Karnataka